ಫ್ರಾನ್ಸಿನ ಭೌತವಿಜ್ಞಾನಿಯಾಗಿದ್ದ ಅಲೆಕ್ಸಿಸ್-ಥೆರೇಸ್ ಪೆಟಿಟ್ರವರು 1791ರ ಅಕ್ಟೋಬರ್ 2ರಂದು ಹಾಟೆ-ಸೋನ್ನ ವೆಸೋಲ್ನಲ್ಲಿ ಜನಿಸಿದರು. ಪೆಟಿಟ್ರವರು ಮೂಲತಃ ಭೌತವಿಜ್ಞಾನಿಯಾಗಿದ್ದರು. ಅವರು ತಮ್ಮ ಭಾವಮೈದುನ ಮತ್ತು ವಿಜ್ಞಾನಿಯಾಗಿದ್ದ ಡೊಮೆನಿಕ್ ಅರಗೋರವರ (1786-1853) ಜೊತೆ ಸೇರಿಕೊಂಡು ಅನಿಲಗಳ ವಕ್ರೀಭವನಾಂಕದ ( ) ಮೇಲೆ ಉಷ್ಣ ಹೇಗೆ ಪರಿಣಾಮ ಬೀರುತ್ತದೆ ಎಂಬ ವಿಷಯದ ಬಗ್ಗೆ ಪ್ರಯೋಗಗಳನ್ನು ನಡೆಸಿದರು. ಆದರೆ 1815ರಲ್ಲಿ ಉಷ್ಣದ ಅಳತೆ ಮತ್ತು ಶೈತ್ಯೀಕರಣ ತತ್ವಗಳ ( ) ಬಗ್ಗೆ ಒಂದು ವೈಜ್ಞಾನಿಕ ಸ್ಪರ್ಧೆ ಏರ್ಪಡಿಸಲಾಗಿತ್ತು. ಆ ಸ್ಪರ್ಧೆಯಲ್ಲಿ ಭಾಗವಹಿಸುವ ಸಲುವಾಗಿ ಪೆಟಿಟ್ರವರು ಮತ್ತು ರಸಾಯನವಿಜ್ಞಾನಿ ಡ್ಯೂಲಾಂಗ್ರವರು ಜೊತೆಯಾಗಿ ಕೂಡಿಕೊಂಡರು. ಹಾಗಾಗಿ ಪೆಟಿಟ್ರವರು ರಸಾಯನವಿಜ್ಞಾನದ ಬಗ್ಗೆ ಕೂಡ ಆಸಕ್ತಿ ವಹಿಸಿದರು. ಅಲ್ಲದೆ ಅನಿಲದ ಉಷ್ಣಮಾಪಕದ ( ) ಮಹತ್ವವನ್ನು ಸಾರಿದ ಆ ಸ್ಪರ್ಧೆಯಲ್ಲಿ ಗೆದ್ದು, 1818ರಲ್ಲಿ ಬಹುಮಾನವನ್ನು ಗಳಿಸಿದ ಮೇಲೆ ಅವರಿಬ್ಬರೂ ಮುಂದೆ ಜೊತೆಯಾಗಿ ಪ್ರಯೋಗಗಳನ್ನು ನಡೆಸಿದರು. ವಿಭಿನ್ನವಾದ ನಪದಾರ್ಥಗಳ ವಿಶಿಷ್ಟ ಉಷ್ಣಗಳನ್ನು ( ) ಪರೀಕ್ಷೆಗೆ ಒಡ್ಡಿದ ಆ ಇಬ್ಬರು ವಿಜ್ಞಾನಿಗಳು 1819ರಲ್ಲಿ ಪ್ರಸಿದ್ಧವಾದ ಕಡ್ಯೂಲಾಂಗ್-ಪೆಟಿಟ್ ನಿಯಮಕಿವನ್ನು (- ) ಪ್ರಕಟಿಸಿದರು. ನಸ್ಥಿತಿಯ ಧಾತುಗಳಲ್ಲಿ ವಿಶಿಷ್ಟ ಉಷ್ಣ ಮತ್ತು ಪರಮಾಣು ತೂಕಗಳ ಗುಣಲಬ್ಧ ನಿಯತಾಂಕವಾಗಿರುತ್ತದೆ () ಅಂದರೆ 5.97ಗೆ ಸಮನಾಗಿರುತ್ತದೆ ಎನ್ನುವುದೇ ಆ ನಿಯಮವಾಗಿದೆ. ನಂತರ ಆಧುನಿಕ ವಿಜ್ಞಾನದಲ್ಲಿ ಆ ನಿಯಮವನ್ನು ಪರಿಷ್ಕರಿಸಲಾಗಿದೆ. ಪರಿಷ್ಕೃತ ನಿಯಮದ ಪ್ರಕಾರ ವಿಶಿಷ್ಟ ಉಷ್ಣದ ಧಾರಕತೆ ( ) ಮತ್ತು ಸಂಬಂಧಿತ ಪರಮಾಣು ರಾಶಿಗಳ ( ) ಗುಣಲಬ್ಧ ಅಂದಾಜಿನ ಮೇಲೆ ನಿಯತಾಂಕವಾಗಿರುತ್ತದೆ ಮತ್ತು ಅದು ಸಾರ್ವತ್ರಿಕ ಅನಿಲ ನಿಯತಾಂಕದ ( ) ಮೂರು ಪಟ್ಟು ಪ್ರಮಾಣಕ್ಕೆ ಸಮನಾಗಿರುತ್ತದೆ ಅಥವಾ 25.07kJ//Kಗೆ ಸಮನಾಗಿರುತ್ತದೆ. ಪೆಟಿಟ್ರವರು 1820ರ ಜೂನ್ 21ರಂದು ಪ್ಯಾರಿಸ್ಸಿನಲ್ಲಿ ನಿಧನರಾದರು. == ಉಲ್ಲೇಖಗಳು == , ( 1970-1990). , Aléxis Thérèse , 16 (1821), 327-335. , ' , . . . 4 (1968–69), 1-22. , : , 11 (1855), 375-412. , , 12 (1967), 157-169.